ಭಾರತಕ್ಕೆ ಯುರೋಪಿಯನ್ನರ ಆಗಮನ
ಇತಿಹಾಸ
ಅಧ್ಯಾಯ -೧
ಭಾರತಕ್ಕೆ ಯುರೋಪಿಯನ್ನರ ಆಗಮನ
ಈ ಅಧ್ಯಾಯದಲ್ಲಿ ಕೆಳಗಿನ ಅಂಶಗಳನ್ನು ತಿಳಿಯುತ್ತೇವೆ.
· ಭಾರತವು ಯುರೋಪಿಯನ್ನರೊಂದಿಗೆ ಹೊಂದಿದ್ದ ವ್ಯಾಪಾರ ಮತ್ತು ವಾಣಿಜ್ಯ ಸಂಬAಧ.
· ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಯುರೋಪಿಯನ್ನರು.
· ಯುರೋಪಿಯನ್ನರ ರಾಜಕೀಯ ಏಳಿಗೆಯ ಹಿನ್ನೆಲೆ-ಕಾರ್ನಾಟಿಕ್ ಯುದ್ಧಗಳು.
· ಪ್ಲಾಸಿಕದನ, ಬಕ್ಸಾರ್ ಕದನ, ದ್ವಿ-ಸರ್ಕಾರ ಪದ್ದತಿ.
· ಬ್ರಿಟಿಷರ ಆಕ್ರಮಣ ನೀತಿ.
ಭಾರತ ಮತ್ತು ಯುರೋಪಿನ ನಡುವೆ ಪ್ರಾಚೀನ ಕಾಲದಿಂದಲೂ ವ್ಯಾಪಾರ ಮತ್ತು
ವಾಣಿಜ್ಯ ಸಂಬAಧಗಳು ಏರ್ಪಟ್ಟಿದ್ದವು. ಪ್ರಮುಖವಾಗಿ ಭಾರತದ ಸಾಂಬಾರ ಪದಾರ್ಥಗಳಾದ
ಮೆಣಸು, ಜೀರಿಗೆ, ದಾಲ್ಚಿನ್ನಿ, ಏಲಕ್ಕಿ, ಶುಂಠಿ ಮುಂತಾದ ಉತ್ಪನ್ನಗಳಿಗೆ ಯುರೋಪಿನಲ್ಲಿ ಅಪಾರ
ಬೇಡಿಕೆ ಇತ್ತು. ಮಧ್ಯಕಾಲದಲ್ಲಿಯೂ ಯುರೋಪ್, ಭಾರತ ಮತ್ತು ಇತರ ಏಷ್ಯಾದ ದೇಶಗಳ
ನಡುವೆ ವ್ಯಾಪಾರ ಮುಂದುವರೆಯಿತು. ಏಷ್ಯಾದ ಸರಕುಗಳನ್ನು ಅರಬ್ ವರ್ತಕರು ಪೂರ್ವ
ರೋಮನ್ (ಬೈಜಾಂಟಿಯನ್) ಸಾಮ್ರಾಜ್ಯದ ರಾಜಧಾನಿಯಾದ ಕಾನ್ಸ್ಟಾಂಟಿನೋಪಲ್ ನಗರಕ್ಕೆ
ತಲುಪಿಸುತ್ತಿದ್ದರು. ಅಲ್ಲಿಂದ ಇಟಲಿಯ (ರೋಮನ್ ಸಾಮ್ರಾಜ್ಯದ ಭಾಗ) ವರ್ತಕರು ಅವುಗಳನ್ನು
ಕೊಂಡು ಯುರೋಪಿನ ದೇಶಗಳಲ್ಲಿ ಮಾರುತ್ತಿದ್ದರು. ಹೀಗೆ ಕಾನ್ಸ್ಟಾಂಟಿನೋಪಲ್ ಅಂತರರಾಷ್ಟಿçÃಯ
ಸರಕು ವಿನಿಮಯ ಕೇಂದ್ರವಾಗುವ ಮೂಲಕ `ಯೂರೋಪಿನ ವ್ಯಾಪಾರದ ಹೆಬ್ಬಾಗಿಲೆಂದೇ'
ಪರಿಗಣಿಸಲ್ಪಟ್ಟಿತು. ಏಷ್ಯಾದ ದೇಶಗಳ ವ್ಯಾಪಾರದ ಮೇಲೆ ಅರಬ್ಬರು ಏಕಸ್ವಾಮ್ಯ ಸಾಧಿಸಿದ್ದರೆ,
ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಇಟಲಿಯ ವರ್ತಕರು ಏಕಸ್ವಾಮ್ಯ ಸಾಧಿಸಿದ್ದರು.
ಏಷ್ಯಾದ ಸರಕುಗಳು ಇಟಲಿಯ ವರ್ತಕರಿಗೆ ಒಳ್ಳೆಯ ಲಾಭವನ್ನು ತಂದು ಕೊಡುತ್ತಿದ್ದವು.
ಕಾನ್ಸ್ಟಾಂಟಿನೋಪಲ್ ನಗರದ ವಶ : ಏಷ್ಯಾ ಮತ್ತು ಯುರೋಪ್ ನಡುವಿನ ವ್ಯಾಪಾರ
ಮತ್ತು ವ್ಯವಹಾರಗಳು ಕಾನ್ಸ್ಟಾಂಟಿನೋಪಲ್ ನಗರದ ಮೂಲಕ ನಡೆಯುತ್ತಿದ್ದವು. ೧೪೫೩ರಲ್ಲಿ
ಆಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು. ಇದರಿಂದಾಗಿ
ಆ ನಗರವನ್ನು ಸಂಧಿಸುವ ಎಲ್ಲಾ ವ್ಯಾಪಾರ ಮಾರ್ಗಗಳು ಟರ್ಕರ ನಿಯಂತ್ರಣಕ್ಕೆ ಹೋದವು.
ಹೊಸದಾಗಿ ಸಿಕ್ಕ ಅವಕಾಶದಿಂದ ಟರ್ಕರು ಈ ಮಾರ್ಗದ ವ್ಯಾಪಾರದ ಮೇಲೆ ತೀವ್ರತರದ
ತೆರಿಗೆಗಳನ್ನು ವಿಧಿಸತೊಡಗಿದರು. ಪರಿಣಾಮವಾಗಿ ವರ್ತಕರಿಗೆ ಈ ಮಾರ್ಗದ ವ್ಯಾಪಾರವು
ಲಾಭದಾಯಕವಾಗಿ ಪರಿಣಮಿಸಲಿಲ್ಲ. ಇದೇ ವೇಳೆ ಇಟಲಿಯ ವರ್ತಕರ ಏಕಸ್ವಾಮ್ಯವನ್ನು
ಮುರಿಯಲು ಸ್ಪೇನ್, ಪೋರ್ಚುಗಲ್ ಮೊದಲಾದ ಯುರೋಪಿನ ದೇಶಗಳ ರಾಜರು ಹೊಸ
